ಕೊಟ್ಟ ಸ೦ಖ್ಯಗಳ ನಡುವಿನ ಲಘು ಸಾಮಾನ್ಯ ಗುಣಕವನ್ನು ಲಘುತಮ ಸಾಮಾನ್ಯ ಅಪವರ್ತ್ಯ (ಲ.ಸಾ.ಅ) , ಆಂಗ್ಲಬಾಷೆಯಲ್ಲಿ ಎಲ್.ಸಿ.ಎಂ () ಎನ್ನುತ್ತಾರೆ. ಉದಾಹರಣೆ: ೪ ಮತ್ತು ೬ ರ ಲ.ಸಾ.ಅ :- ೪ ರ ಅಪವರ್ತ್ಯಗಳು:-೪,೮,೧೨,೧೬,೨೦,೨೪,೨೮,೩೨,೩೬,೪೦ ೬ ರ ಅಪವರ್ತ್ಯಗಳು :-೬,೧೨,೧೮,೨೪,೩೦,೩೬,೪೨,೪೮,೫೪,೬೦ ೪ ಮತ್ತು ೬ ಸಂಖ್ಯೆಗಳ ಸಾಮಾನ್ಯ ಅಪವರ್ತ್ಯಗಳು :-೧೨,೨೪,೩೬..... ಮೇಲ್ಕಂಡ ೪ ಮತ್ತು ೬ರ ಸಾಮಾನ್ಯ ಅಪವರ್ತ್ಯಗಳಲ್ಲಿ ಚಿಕ್ಕ ಸಂಖ್ಯೆ ೧೨,ಇದನ್ನೇ ಲಘುತಮ ಸಾಮಾನ್ಯ ಅಪವರ್ತ್ಯ ಎಂದು ಕರೆಯುತ್ತೇವೆ. == ಲ.ಸಾ.ಅ ದ ಬಳಕೆ: == ೧) ಇಬ್ಬರು ವ್ಯಾಪಾರರಿದ್ದಾರೆ ಅವರಲ್ಲಿ ಒಬ್ಬ ಪುಸ್ತಕವನ್ನು ರೂ ೪ ರಂತೆ ಮಾರುತ್ತಿದ್ದಾನೆ ಮತ್ತೊಬ್ಬ ವ್ಯಾಪಾರಿ ಲೇಖನಿ ಯನ್ನು ರೂ ೬ ರಂತೆ ಮಾರುತಿದ್ದಾನೆ ಎಂದುಕೊಳ್ಳೊಣ.ಹಾಗಾದರೆ ಲೇಖನಿ ಮಾರುವವನು ಮತ್ತು ಪುಸ್ತಕ ಮಾರುವವನು ಎಷ್ಟು ಕನಿಷ್ಟ ವಸ್ತುಗಳನ್ನು ಮಾರಿದಾಗ ಅವರಿಬ್ಬರ ಬಳಿಯ ಹಣ ಒ೦ದೇ ಆಗುವುದು. ೪ ಮತ್ತು ೬ ರ ಲ.ಸಾ.ಅ :- ೪ ರ ಅಪವರ್ತ್ಯಗಳು:-೪,೮,೧೨,೧೬,೨೦,೨೪,೨೮,೩೨,೩೬,೪೦ ೬ ರ ಅಪವರ್ತ್ಯಗಳು :-೬,೧೨,೧೮,೨೪,೩೦,೩೬,೪೨,೪೮,೫೪,೬೦ ೪ ಮತ್ತು ೬ ಸಂಖ್ಯೆಗಳ ಸಾಮಾನ್ಯ ಅಪವರ್ತ್ಯಗಳು :-೧೨,೨೪,೩೬..... ೪ ಮತ್ತು ೬ ರ ಲಘುತಮ ಸಾಮಾನ್ಯ ಅಪವರ್ತ್ಯ ೧೨. ಪುಸ್ತಕ ಮಾರುವವನ ಹಾಗು ಲೇಖನಿ ಮಾರುವವನ ಬಳಿಯ ಹಣ ಒ೦ದೇ ಆಗಬೇಕಾದರೆ. ಪುಸ್ತಕ ಮಾರುವವನು ಕನಿಷ್ಟ ೨ ಪುಸ್ತಕ ಮಾರಬೇಕು.ಲೇಖನಿ ಮಾರುವವನು ಕನಿಷ್ಟ ೩ ಲೇಖನಿ ಮಾರಬೇಕು.ಆಗ ಇಬ್ಬರ ಬಳಿಯೂ ರೂ12 ಇರುತದೆ. ೨) ೩ ಗಂಟೆಗಳು ಪ್ರತಿ ೨ ಸೆಕೆಂಡು,೪ ಸೆಕೆಂಡು ಮತ್ತು ೬ ಸೆಕೆಂಡುಗಳಿಗೆ ಬಡಿದುಕೊಳ್ಳುತ್ತವೆ ಹಾಗಾದರೆ ೩೦ ನಿಮಿಷದಲ್ಲಿ ಎಷ್ಟುಬಾರಿ ಅವುಗಳು ಒಟ್ಟಿಗೆ ಬಡಿದುಕೊಳ್ಳುತ್ತವೆ.? ೩ ಗಂಟೆಗಳು ಪ್ರತಿ ೧೨ ಸೆಕೆಂಡುಗಳಿಗೆ ಒಟ್ಟಿಗೆ ಬಡಿದುಕೊಳ್ಳುತ್ತವೆ. ಹಾಗಾದರೆ ೩ ಗಂಟೆಗಳು ೩೦ ನಿಮಿಷದಲ್ಲಿ ೧೫೦ ಬಾರಿ ಒಟ್ಟಿಗೆ ಬಡಿದುಕೊಳ್ಳುತ್ತವೆ.